ಬೆಂಗಳೂರು ನಗರ : ರಾಜಾಜಿನಗರ


raj ಬೆಂಗಳೂರಿನ ವಾಯುವ್ಯ ಭಾಗದಲ್ಲಿರುವ ರಾಜಾಜಿನಗರ ನಗರದ ಹೃದಯ ಭಾಗಕ್ಕೆ ಹತ್ತಿರವಾದ ಹಳೆಯ ಹಾಗು ಸುಸಜ್ಜಿತ ಬಡಾವಣೆ. ಈ ಬಡಾವಣೆಯ ಪೂರ್ವಕ್ಕೆ ಡಾ ರಾಜಕುಮಾರ್ ರಸ್ತೆಯಿದೆ ಮತ್ತು ಪಶ್ಚಿಮಕ್ಕೆ ಕಾರ್ಡ್ ರಸ್ತೆ ಇದೆ. ರಾಜಾಜಿನಗರವನ್ನು ಆರು ಬ್ಲಾಕ್ ಗಳಾಗಿ ವಿಂಗಡಿಸಲಾಗಿದೆ. ಉತ್ತರ ಭಾಗಕ್ಕೆ ಮೊದಲನೇ ಬ್ಲಾಕ್ , ದಕ್ಷಿಣ ಭಾಗಕ್ಕೆ ಆರನೇ ಬ್ಲಾಕ್  ಬರುತ್ತದೆ. ಇಲ್ಲಿ ಹಲವು ಕೈಗಾರಿಕಾ ಎಸ್ಟೇಟ್ ಗಳಿವೆ ಹಾಗೆ ಹಲವು ಶಾಲಾ - ಕಾಲೇಜುಗಳನ್ನು ಕಾಣಬಹುದು, ನಾನು ಒದಿದ್ದು ಬೆಳದದ್ದು ಈ ಬಡಾವಣೆಯಲ್ಲೇ. ವರ್ಲ್ಡ್ ಟ್ರೇಡ್ ಸೆಂಟರ್, ಇಸ್ಕಾನ್, ರಾಜಾಜಿನಗರ್ ಎಂಟ್ರನ್ಸ್, ರಾಮಮಂದಿರ, ಭಾಷ್ಯಂ ವೃತ್ತ, ನವರಂಗ್ ಈ ಬಡಾವಣೆಯ ಹೆಗ್ಗುರುತುಗಳು. ನಿಮಗೆ ಯಾವುದೇ ಕಂಪನಿಯ ಹೊಚ್ಚ ಹೊಸ ಬೈಕ್ ಬೇಕಾದಲ್ಲಿ ಡಾ ರಾಜಕುಮಾರ್ ರಸ್ತೆಯಲ್ಲಿ ಸಿಗುತ್ತದೆ. ರಾಜಾಜಿನಗರದ ಸಾಹಿತ್ಯಾಸಕ್ತ ಹಾಗೂ ಸ್ಪೂರ್ತಿದಾಯಕ ಸ್ನೇಹಿತರಿಗೆ ನನ್ನ ಧನ್ಯವಾದಗಳು.

Leave a comment


Please note, comments must be approved before they are published