ಜುಗಾರಿ ಕ್ರಾಸ್ : ಮಾಂತ್ರಿಕನ ಕುಂಚದಲ್ಲಿ ಅರಳಿದ ಮಂತ್ರಮುಗ್ಧಗೊಳಿಸುವ ಕಥನ


4 "ಜುಗಾರಿ ಕ್ರಾಸ್" ಹೆಸರು ಕೇಳೋಕೆ ಎಷ್ಟು ಚೆನಾಗಿದೆ ಅಲ್ವ ? ಒಂದು ಕ್ರಾಸಿನಿಂದ ಶುರುವಾಗುವ ಈ ಕಥೆ ನಂತರ ದಟ್ಟಾರಣ್ಯದಷ್ಟೂ ಬೆಳೆಯುವುದೇ ಈ ಪುಸ್ತಕದ ವೈಶಿಷ್ಟ್ಯ. ಈ ಕಥೆಯಲ್ಲಿ ಬರುವ ಪ್ರತಿಯೊಂದು ಪಾತ್ರಕ್ಕೂ ಮತ್ತೊಂದು ಪಾತ್ರದ ಜೊತೆ ನಂಟಿದೆ. ಕುತೂಹಲಕಾರಿಯಾಗಿ, ಅಲಲ್ಲಿ ಹಾಸ್ಯಭರಿತ ಸನ್ನಿವೇಶಗಳೊಂದಿಗೆ ನಿಗೂಢವನ್ನು ಭೇದಿಸುವ ಪೂರ್ಣಚಂದ್ರ ತೇಜಸ್ವಿರವರ ಯೋಚನಾ ಲಹರಿ ಅತ್ಯದ್ಭುತವಾದದ್ದು. ದೌಲತ್ ರಾಮ್ - ಕುಟ್ಟಿ ಜುಗಲ್ಬಂದಿ, ಸುರೇಶ ಗೌರಿ ದಂಪತಿ, ಶಾಸ್ತ್ರಿ, ಶೇಷಪ್ಪ, ಜಾನಿ ಗ್ಯಾಂಗ್, ರಾಜಪ್ಪ ಪಾತ್ರಗಳು ಈ ಕಥೆಯ ಜೀವಾಳ. ಏಲಕ್ಕಿ ಮೂಟೆಯೊಂದಿಗೆ ಹೊರಡುವ ಸುರೇಶ ಗೌರಿ ದಂಪತಿ, ದೌಲತ್ ರಾಮ್ ಕುಟ್ಟಿಗೆ ಎದುರಾಗುವುದು. ಪ್ಯಾಕೆಟ್ ರಹಸ್ಯ, ಅದರಿಂದ ಏಲಕ್ಕಿ ವ್ಯಾಪಾರದ ಮೇಲೆ ಆಗುವ ಪರಿಣಾಮ. ಸುರೇಶನಿಗೆ ಸಿಗುವ ಚೆಕ್ಕು, ಆ ಚೆಕ್ಕು ತರುವ ಅವಾಂತರ. ಮನ್ಮಥ ಬೀಡಾ ಸ್ಟಾಲ್, ಜಾನಿ ಗ್ಯಾಂಗ್, ಕೆಂಪು ಅರಳುಗಳು, ಕನ್ನಡಿಯ ಪ್ರತಿಬಿಂಬ ಪುಸ್ತಕದ ಮೊದಲಾರ್ಧದ ಕೆಲವು ಸನ್ನಿವೇಶಗಳು. ಸುರೇಶ ಮಾಡುವ ಉಪಾಯ, ಬಸ್ ಬದಲು ಮೇಲ್ ಟ್ರೈನ್. ಹಳೆಗನ್ನಡ ಪದ್ಯ ಪೂರ್ಣಗೊಳಿಸಿ ರತ್ನಮಾಲಾ ಒಗಟು ಬಿಡಿಸುವ ಸುರೇಶನ ಬುದ್ಧಿವಂತಿಕೆ. ರೈಲ್ವೆ ಕ್ಯಾಂಟೀನ್ ನಂತರ ಸುರಂಗಕ್ಕೆ ಎಗರುವ ಸುರೇಶ, ಗೌರಿ. ಸುರಂಗದಲ್ಲಿ ಕೇಳಿಸುವ ಅಶರೀರವಾಣಿ, ಕಾಡಿನ ಒಳದಾರಿಯ ಮೂಲಕ ಕಮಾನು ಸೇತುವೆ ತಲುಪುವುದು. ಕಡೆಗೆ ರಾಜಪ್ಪನ ಭೇಟಿ, 24 ಘಂಟೆಗಳ ಸಾಹಸಕ್ಕೆ ಪೂರ್ಣವಿರಾಮ ದೊರಕುವುದರ ಮೂಲಕ ಕಥೆ ಮುಗಿಯುತ್ತದೆ. ವೇಗವಾಗಿ ಓದಿಸಿಕೊಂಡು ಹೋಗುವ ಈ ಕಥೆ ಓದುಗನಿಗೆ ಪ್ರಕೃತಿ ಸೌಂದರ್ಯವನ್ನು ಸವಿಸುತ್ತದೆ. "ಜುಗಾರಿ ಕ್ರಾಸ್ !!" 5

Leave a comment


Please note, comments must be approved before they are published