ನೀ ಸೂತ್ರಧಾರಿ ನಾ ಪಾತ್ರಧಾರಿ : ಜೋಗಿ ಜೋಗಿ ಜೋಗಿ


  ಜೋಗಿಯವರನ್ನ ನಾನು ಮೊದಲು ಸಂದಿಸಿದ್ದು ಒಂದು ಮಳಿಗೆಯಲ್ಲಿ, ಅವರು ಕೆಲವು ಚಲನಚಿತ್ರಗಳ ಸಿ.ಡಿ / ಡಿ.ವಿ.ಡಿ ಗಳನ್ನು ಕೊಳ್ಳುತ್ತಿದ್ದರು. ಅವರನ್ನು Facebookನಲ್ಲಿ ಮಾತನಾಡಿಸಿದ್ದೆ, ನೇರವಾಗಿ ಮಾತನಾಡಿಸಿದ್ದು ಅದೇ ಮೊದಲು. ಮೃದುಭಾಷಿಯಾದ ಅವರನ್ನು ಭೇಟಿಯಾದಾಗ ನನಗೆ ಅರಿವಿದಿದ್ದು ಅವರು ಕನ್ನಡದ ಹಿರಿಯ ಲೇಖಕರೆಂದು ಮಾತ್ರ. ಕಥೆ ಚಿತ್ರಕಥೆ ಸಂಭಾಷಣೆ ಏನಿದು ಕಥೆ ಚಿತ್ರಕಥೆ ಸಂಭಾಷಣೆ ? ಸಿನಿಮಾ ಮಾಡಲು ಕೈಪಿಡಿ, ಸಿನಿಮಾ ಆಸಕ್ತರ Encyclopedia. ಹೌದು, ನಿಜ! ಈ ಪುಸ್ತಕದಲ್ಲಿ ಅದಕ್ಕಿಂತ ಹೆಚ್ಚಿದೆ, ಇದು ಜೋಗಿ ಯೋಗಿಯಾದ ಪಯಣದ ಕಥೆ, ಮುಂದಿನ ಯೋಗಿಗಳಿಗೊಂದು ಮಾರ್ಗದರ್ಶನದ ಸೆಲೆ. ಭಗವದ್ ಗೀತೆಯಲ್ಲಿ 18 ಅಧ್ಯಾಯಗಳಿವೆ, ಹಾಗೆ ಈ ಪುಸ್ತಕದಲ್ಲಿ 18 ನಿರ್ದೇಶಕರ ಚಿಂತನೆಗಳಿವೆ. ವೈಚಾರಿಕವಾಗಿ ಈ ಪುಸ್ತಕ ಸಾವಣ್ಣ ಪ್ರಕಾಶನದ TRADEMARK ಪುಸ್ತಕ. ಮೇಲಿನ ಚಿತ್ರದಲ್ಲಿ ತಿರುಗುವ ಚಕ್ರದಲ್ಲಿ 18 ನಿರ್ದೇಶಕರಿದ್ದರೆ, ದಾರ ಮತ್ತು ಕೈಗಳು ಜೋಗಿಯವರದ್ದು. 18 ನಿರ್ದೇಶಕರು ಕೆಳಗಿನ ಚಕ್ರದಂತಹ ಚಿತ್ರಗಳನ್ನು ತಿರುಗಿಸಿದವರು. ಜೋಗಿಯವರ ಬಾಲ್ಯದ ದಿನಗಳ ಚಿತ್ರಗಳಿಂದ ಪ್ರಾರಂಭವಾಗುವ ಪುಸ್ತಕ, ನಂತರ ಅಂದಿನ ಕಥೆಗಳಿಗಿದ್ದ ಉತ್ಕ್ರಷ್ಟತೆಯನ್ನು ಎತ್ತಿ ಹಿಡಿಯುತ್ತದೆ. ಭಗವದ್ ಗೀತೆಯ ಸಣ್ಣ ತುಣುಕಿನೊಂದಿಗೆ ಚಿತ್ರಕಥೆಯ ಕಡೆ ತಿರುಗುತ್ತದೆ. ಚಿತ್ರಕಥೆಯ ನಂತರ ಸಂಭಾಷಣೆಯೊಂದಿಗೆ ಜೋಗಿಯವರು ಚಿತ್ರ ಜಗತ್ತಿಗೆ ಕಾಲಿಡುವ ಹಾಸ್ಯಭರಿತ ಸನ್ನಿವೇಶಗಳು ಪುಸ್ತಕದಲ್ಲಿದೆ. ಸೀರಿಯಲ್ ಸಂಭಾಷಣೆ ---> ಸೀರಿಯಲ್ ಶಾಟ್ಸ್ ---> ಚಲನಚಿತ್ರ ಕಥೆ --->  ಚಲನಚಿತ್ರ ಸಂಭಾಷಣೆ ---> ಚಿತ್ರಕಥೆ ((((((( ನಿರ್ದೇಶನ ???))))))) ಮೇಲಿನ ರೀತಿ ಒಂದರ ನಂತರ ಒಂದರಂತೆ ಮೇಲ್ಬಡ್ತಿ ಪಡಿಯುತ್ತ ಸಾಗುತ್ತೆ ಜೋಗಿಯವರ ಸಿನಿಪಯಣ. ಈ ಮಧ್ಯೆ ಅವರ ಒಡನಾಡಿಗೆ ಬರುವ ನಿರ್ದೇಶಕರ ಕುರಿತು ಜೋಗಿಯವರು ಮೊದಲು ತಿಳಿಸುತ್ತಾರೆ. ನಂತರ ಆ ನಿರ್ದೇಶಕರು ಚಲನಚಿತ್ರ ಕಲೆ ಕಟ್ಟುವು ಪರಿಯನ್ನು ತಿಳಿಸಿಕೊಡುತ್ತಾರೆ. ಪುಸ್ತಕದ ಮೊದಲಾರ್ಧದಲ್ಲಿ  ಜೋಗಿಯವರ ಮಿತ್ರ ವೃಂದದಿಂದ ವೀರೇಶ್, ಉದಯ ಮರಿಕಿಣಿ, ಅಹೋರಾತ್ರ ನಟೇಶ ಪೋಲೆಪಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 18 ನಿರ್ದೇಶಕರ ಲೇಖನಗಳಲ್ಲಿ ನನಗೆ ಇಷ್ಟವಾದ ಸಾಲುಗಳು/ವಿಷಯಗಳು : ಸ್ವಲ್ಪ ಜಾಸ್ತಿ ಶ್ರಮ ಹಾಕಿದ್ರೆ ಅದನ್ನು ಕರ್ನಾಟಕದ ಕಥೆಯನ್ನಾಗಿ ಹೇಳೋದಕ್ಕೆ ಸಾಧ್ಯ.  ಆದರೆ ಅದು ಇಂಡಿಯಾದ ಕಥೆನೂ ಆಗಬೇಕು; ಅದು ಇಂಗ್ಲೆಂಡ್ ಕಥೆನೂ ಆಗಬೇಕೆಂದು ಮಾಡೋದಿದೆಯಲ್ಲ ಅದು ಬಹಳ ಕಷ್ಟ. ಈ ತರದ ಪ್ರಯತ್ನವನ್ನು ನಾವು ಮಾಡ್ತಾ ಹೋಗಬೇಕು. ಅದೊಂದು ಅನುಭವ ಆಗ್ಬೇಕು. ಅದು ನೋಡೋನಿಗೆ ಕೇಳುವವನಿಗೆ, ಓದುವವನಿಗೆ ಒಂದು ಅನುಭವ ಆಗ್ಬೇಕು ಅದು. ಅವನ ಇನ್ವಾಲ್ವ್ಮೆಂಟ್, ಅವನ ಮ್ಯಾಜಿಕ್, ಅವನ ತನ್ಮಯತೆ ಮತ್ತು ಇಬ್ಬರು ಸೇರಿ ನಡೆಯುವಾಗ ಹಾಗಾಗುತ್ತೆ ಅಂದ್ರು. ಯಾವತ್ತೋ ಏನೋ ಅನಿಸಿದ್ದರ ಹುಡುಕಾಟದಲ್ಲಿ ಇನೇನೋ ಸಿಕ್ಕು, ಅದು ಆ ಮೊದಲು ಅನಿಸಿದ್ದಕ್ಕಿಂತ ಅದ್ಭುತವಾದದ್ದ, ಸುಮಾರಾದದ್ದ ಎಂದು ಎಂದಿಗೂ ಗೊತ್ತಾಗದಿರುವುದೇ ಎಲ್ಲಾ ಕಲೆಗಳ ಮೂಲ. ಚಿತ್ರಕಥೆ ಅನ್ನೋದು ಸಿನೆಮಾಗೆ 'ಹೃದಯ'. ಈ ಹೃದಯ ಸರಿಯಾಗಿ ಕೆಲಸ ಮಾಡಿದ್ರೆ ಮಾತ್ರ ಎಲ್ಲಾ ಭಾಗಕ್ಕೂ ಒಳ್ಳೆಯ ರಕ್ತ ಸಂಚಾರ ಮತ್ತು ಸರಾಗ. ಕಥೆ ಜೊತೆ ಬೇರೆಯಲಿಕ್ಕೆ ಆಗದಿದ್ದರೆ ಸಿನಿಮಾ ಮಾಡುವುದು ಸಾಧ್ಯವೇ ಇಲ್ಲ. ಹತ್ತೇ ಜನ ಪ್ರೇಕ್ಷಕರಿರಬಹುದು. ಆದರೆ ನಾಳೆ ನೂರಾಗುತ್ತೆ. ನಾಡಿದ್ದು ಒಂದ್ ಸಾವಿರ ಆಗಬಹುದು. ಈ ಪ್ರಶ್ನೆಗಳಿಗೆಲ್ಲ ಚಿತ್ರಕತೆಗಾರ ಸಮರ್ಪಕವಾದ, ತನ್ನ ದೃಷ್ಟಿಯಲ್ಲಿ ಸಮಂಜಸವಾದ ಉತ್ತರಗಳನ್ನು ಕೊಡಬೇಕು. ನಾವು ಅನುಭವ ಹಂಚಿಕೊಳ್ಳಬಹುದಷ್ಟೇ ವಿನಃ, ಜ್ಞಾನವೊಂದಿದ್ದು ಅದನ್ನು ಹಂಚಿಕೊಳ್ಳುವುದು ಸಾಧ್ಯವಿಲ್ಲ. ಏನನ್ನಾದರೂ ಓದಲು ನಾವು ಭಾಷೆ ಹಾಗೂ ಸಾಹಿತ್ಯವನ್ನು ಕಲಿಯಬೇಕು, ಆದರೆ ಸಿನಿಮಾದಲ್ಲಿ ಏನನ್ನು ಕಲಿಯದೇ ಓದಬಹುದು ಎಂಬ ಭ್ರಮೆಯೊಂದು ಸೃಷ್ಟಿಯಾಗಿದೆ. ಉತ್ತರ ಸಿಗದಿರೋದೂ ಒಂಥರ ಒಳ್ಳೆಯದೇ, ಜನ ಒಪ್ಪುತ್ತಾರೋ ಬಿಡುತ್ತಾರೋ, ಈ ಭಾಗ ಅವರಿಗೆ ಮೆಚ್ಚಿಗೆಯಾಗುತ್ತೋ ಇಲ್ಲವೋ - ಈ ಥರದ ಗೊಂದಲದಲ್ಲೇ ಸ್ಕ್ರಿಪ್ಟ್ ಬರೆಯುತ್ತೇವಲ್ಲಾ, ಅದೇ ಎಕ್ಸೈಟಿಂಗ್ ಆದ ಪ್ರಯಾಣ ನನ್ನ ಪ್ರಕಾರ. ಒಳ್ಳೆ ಸಿಹಿ ತಿಂಡಿ ಮಾಡುವುದಕ್ಕೆ ಸಕ್ಕರೆ, ತುಪ್ಪ ಎಲ್ಲ ಬೇಕಾಗುತ್ತದೆ ಅಂತ ಹೇಳಬಹುದು, ಹಾಗಂತ ಸಕ್ಕರೆ ತುಪ್ಪಗಳು ಇದ್ದ ಮಾತ್ರಕ್ಕೆ ಬಾಯಿ ಚಪ್ಪರಿಸುವಂತೆ ಮಾಡುವ ಸಿಹಿ ತಿಂಡಿ ತಯಾರಾಗುತ್ತದೆ ಅನ್ನುವುದು ಕಷ್ಟ. ಯಕ್ಷಗಾನದಂಥ ಹಲವು ವರ್ಣರಂಜಿತ ಪ್ರಕಾರಗಳಲ್ಲಿ ಆ ಶಕ್ತಿ ಇದೆ. ಏನೋ ಒಂದು ನನ್ನನ್ನು ಬಾದಿಸುತ್ತದಲ್ಲಾ, ಪರ್ಸನಲ್ ಲೆವೆಲ್ ನಲ್ಲಿ ನಾನು ಡಿಸ್ಟರ್ಬ್ ಆಗ್ತೀನಲ್ಲ, ಅಲ್ಲಿಂದ ನನ್ನ ಮನಸ್ಸು ಆ ವಸ್ತುವಿನ ಆಚೀಚೆ, ಆ ಕಥೆಯ ಆಚೀಚೆ ಸುತ್ತಾಡೋಕೆ ಪ್ರಾರಂಭ ಮಾಡುತ್ತೆ. ನಿಜವಾದ ಸಂಭಾಷಣೆಕಾರ ಅಂತಹ ಮಿತಿಗಳನ್ನು ಮೀರಿ ಹೊಸತನ್ನು ತಂದರೇನೇ ಯಶಸ್ಸು ಕಾಣುತ್ತಾನೆ. ಪುಸ್ತಕ ಜ್ಞಾನದ ಅಭಿಮಾನಿಯಾಗಿದ್ದ ನನಗೆ ಬದುಕಿನ ಪ್ರತಿ ಸನ್ನಿವೇಶ, ಅನುಭವ, ವೈವಿಧ್ಯಮಯ ವ್ಯಕ್ತಿತ್ವವನ್ನು ಇಡಿಯಾಗಿ ಅರಗಿಸಿಕೊಳ್ಳೋ ಮಹತ್ವಕಾಂಕ್ಷೆ ಹುಟ್ಟಿದೆ. ಕನ್ನಡ ಚಿತ್ರರಂಗದತ್ತ ಪ್ರಪಂಚವೇ ತಿರುಗಿ ನೋಡುವಂತಾಗಲಿ. ಓದುವುದಲ್ಲಿರುವ ಬಹಳ ದೊಡ್ಡ ಪ್ರಯೋಜನವೆಂದರೆ ನಮ್ಮ ಕಲ್ಪನಾ ಶಕ್ತಿ ಹೆಚ್ಚುತ್ತದೆ ಹಾಗೂ ಒಂದು ವಿಷಯವನ್ನು ಅನೇಕ ಆಯಾಮಗಳಿಂದ ನೋಡಬಹುದಾದ ವಿಶಿಷ್ಟ ಬುದ್ದಿವಂತಿಕೆ ದೊರಕುತ್ತದೆ. ಒಟ್ನಲ್ಲಿ ನಾನಲ್ಲದ ನಾನುವಿನ ನಾಟಕದಲ್ಲಿ ನಾನೇ ಪ್ರೇಕ್ಷಕ. ಪ್ರತಿಯೊಂದು ಕ್ಷೇತ್ರವನ್ನೂ ಶೋಧಿಸುತ್ತಾ ಹೋದರೆ ಇನ್ನೂ ಅನೇಕ ಒಳನೋಟಗಳನ್ನು ಪಡೆಯುತ್ತೇವೆ.

  ಶುಭಂ

ಕಥೆ ಚಿತ್ರಕಥೆ ಸಂಭಾಷಣೆ ಪುಸ್ತಕ ಓದಿದ ಮೇಲೆ ಜೋಗಿಯವರ ಬಗ್ಗೆ ಹೆಚ್ಚದನ್ನು ತಿಳಿದುಕೊಂಡಿದ್ದೇನೆ. ಸಾವಣ್ಣ ಪ್ರಕಾಶನದ ಮಾಲಿಕರಾದ ಜಮೀಲ್- ಶಫೀಕ ದಂಪತಿಗಳಿಗೆ ನನ್ನ ಕೃತಜ್ಞತೆಗಳು. SumShowDone.com ಜಾಲತಾಣದಲ್ಲೇ ಪುಸ್ತಕ ಬಿಡುಗಡೆಯಾದ ಮೊದಲ 2-3 ದಿನಗಳಲ್ಲೇ ನೂರಕ್ಕೂ ಹೆಚ್ಚು ಪುಸ್ತಕಗಳು ಮಾರಾಟವಾಗಿದೆ. ಹಲವು ಯುವಕರು ಪುಸ್ತಕ ಓದಿದ ಮೇಲೆ ನಮ್ಮ ಕಚೇರಿಗೆ ಕರೆ ಮಾಡಿ ಚಲನಚಿತ್ರಗಳಿಗೆ ಸಂಭಂದಿಸಿದ ಪುಸ್ತಕಗಳನ್ನು ಕೊಳ್ಳಲು ಆಸಕ್ತಿ ವ್ಯಕ್ತಪಡಿಸಿದ್ದಾರೆ. ಪುಸ್ತಕ ಪ್ರೀತಿ - Book,Coffee & Conversations, ನಾಳೆ ಡಿಸೆಂಬರ್ 17 ಬೆಳ್ಳಿಗೆ 11:30ಕ್ಕೆ ಗಾಂಧೀ ಭವನ, ಕುಮಾರಪಾರ್ಕ್ ಈಸ್ಟ್, ಶೇಷಾದ್ರಿಪುರಂ, ಕಾರ್ಯಕ್ರಮಕ್ಕೆ ಬನ್ನಿ.

Leave a comment


Please note, comments must be approved before they are published